Saturday, August 2, 2008

ಆ ಒಲವ ಕೊಲುವ ಕೆಂಪು

ಇತ್ತ,
ಅವಳು ಹಾಡುತಿದ್ದಳು... ಇನ್ನೆರಡೇ ದಿನ
ನನ್ನರಸ ಬರಲು, ಸಂತಸವ ತರಲು ಇನ್ನೆರಡೇ ದಿನ
ಅವನಿರದೆ ಈಮನದ ಕೋಣೆಯಲ್ಲ ಭಣ-ಭಣ
ಅವನಾಗಮನಕೆ ಕಾಯುತಿದೆ ಮನದ ಕಣ-ಕಣ
ಅತ್ತ,
ಆತ ನಡುಗುತ್ತಿದ್ದ ಆ ಚಳಿಯ ತೆಳು ಚಾದರದೊಳಗೆ
ಮನ ಬೆಚ್ಚಗೆ ವಿಹರಿಸುತ್ತಿತ್ತು ಅವಳ ನೆನಪೊಳಗೆ
ಇನ್ನೆರಡೇ ದಿನಹುದಲ್ಲ ಅವಳು ಸೇರಲು ನನ್ನ ತೋಳೊಳಗೆ
ಓಹೋ! ಈಚಳಿಯು ಬಿಡದಲ್ಲ ಮುಳುಗಳವಳ ನೆನಪೊಳಗೆ
ಇತ್ತ,
ನಾನು ಆ ದಿನ ಉಡಬೇಕು ರಕ್ತವರ್ಣದ ಜರಿಸೀರೆ
ಎಂದುಕೊಳ್ಳುತ್ತ ನಸುನಾಚಿ ನಕ್ಕು ಕೆಂಪಾದಳಾ ನೀರೆ
ಆ ತುಂಬು ಕೆನ್ನೆಯ ಮೇಲೆ ಮುಂಗುರುಳ ನ್ರತ್ಯ
ಕಚಗುಳಿಡುತ್ತ ನೆನಪಿಸಿತ್ತವನ ಮುತ್ತಿನ ಮತ್ತನ್ನ
ಅತ್ತ,
ಆತ ನಗುತಿದ್ದ ನಕ್ಕು ಸುಮ್ಮನಗುತ್ತಿದ್ದ ಇದೇನು ಹುಚ್ಚೆಂದು
ಬೇಡುತ್ತಿದ್ದ ಒಲುಮೆಯಾ ಹಣತೆಯೆಂದು ಆರದಿರಲೆಂದು
ಬೇಗ ಬಾ.. ಓವೀರ ಗಡಿಯಲಿ ವೈರಿಗಳ ಆಕ್ರಮಣವಂಬ
ಕಹಳೆ ಕೇಳಿದೊಡೆ ಎದ್ದೋಡಿದ ಮಾತೆಯೊಡಲ ಕಾಯಲೆಂದು
ಇತ್ತ,
ಓ ನೆರಿಗೆ ನೀನೆಷ್ಟು ಚಂದ, ಈ ಕೆಂಪು ಸೀರೆಯಲ್ಲಿ
ಎಂದು ಗುನುಗುತ್ತ ಕೈಟ್ಟಳು ಕೆಂಪು ಸಿಂಧೂರದಲ್ಲಿ
ತಾಳಿಗೆ, ಬೈತಲೆಗೆ ಇಡುವ ಮೊದಲೇ ಬೊಟ್ಟು
ಕೆಂಪು ಚೆಲ್ಲಿ ಓಕುಳಿಯಾಡುತ್ತ ರಂಗವಲ್ಲಿ ಇಟ್ಟಿತಿಲ್ಲಿ
ಅತ್ತ,
ಮೈಮರೆತು ಹೋರಾಡುತ್ತಿದ್ದ ಆತ, ಮೈತುಂಬ ಕೆಂಪು
ಕರುಣೆಯಿರದ ಹ್ರದಯವೊಂದು ಇಟ್ಟಿತವನಿಗೆ ಗುಂಡು
ಕೆಂಪು ಚೆಲ್ಲಿ ಓಕುಳಿಯಾಡುತ್ತ ರಂಗವಲ್ಲಿ ಇಟ್ಟಿತಲ್ಲಿ
ಒಲವಿನ ಹೂ ಅರಳುವ ಮೊದಲೇ ಬಾಡಿ ಉದುರಿತಲ್ಲಿ
ಅತ್ತ
ಆ ಕೆಂಪಲ್ಲಿ ಮಲಗಿದ್ದಾನೆ ಆತ ಸುಮ್ಮನೇ
ಇತ್ತ ಮೈತುಂಬ ಕೆಂಪು ತುಂಬಿ ನಕ್ಕಳಿವಳು ಭಿಮ್ಮನೆ..
ಅದು ಕೊಲುವ ಕೆಂಪು,, ಇದು ಒಲವ ಕೆಂಪು..
ಕೊಲುವ ಕೆಂಪು, ಒಲವ ಕೆಂಪ ಕೊಲುವ ಮೊದಲೇ,,
ಕೊಲಲಿ ಅವಳೊಲವನೇ ಅವಳು ಅಲ್ಲವೇನು?...

13 comments:

ವಿಜಯ್ ಜೋಶಿ said...

ಕವನ ಓದಿದೆ. ತಕ್ಷಣ ನೆನಪಿಗೆ ಬಂದಿದ್ದು ರಾಷ್ಟ್ರೋತ್ಥಾನ ಸಾಹಿತ್ಯದವರ 'ಕಾರ್ಗಿಲ್ ಕಂಪನ' ಎಂಬ ಪುಸ್ತಕ.
ಕಾರ್ಗಿಲ್ ಯುದ್ಧದಲ್ಲಿ ಅನೇಕ ಮಂದಿ ಪ್ರಾಣತ್ಯಾಗ ಮಾಡಿದ್ದು, ಅವರ ಮಡದಿಯರು ವಿಧವೆಯರಾಗಿದ್ದು ಇವೆಲ್ಲಾ ನೆನಪಾಗುತ್ತದೆ.
ಸಾಧ್ಯವಾದರೆ ಆ ಪುಸ್ತಕವನ್ನೊಮ್ಮೆ ಓದಿ.
ಹೀಗೆ ಬರೆಯುತ್ತಿರಿ.

Anonymous said...

ಇವತ್ತಷ್ಟೇ ನಿಮ್ಮ ಬ್ಲಾಗ್ ನೋಡಿದ್ದು. ಕವನಗಳು ಚೆನ್ನಾಗಿವೆ.
ಭಾಷೆ ಆಪ್ತವಾಗಿದೆ. "ನಿವೇದನೆ" ಎಂಬ ಹೆಸರೂ ಮುದ್ದಾಗಿದೆ.
ಕವನಕ್ಕೆ ನಿಮ್ಮ ಬರಹಗಳನ್ನು ಸೀಮಿತಗೊಳಿಸಿಕೊಳ್ಳಬೇಡಿ.

Anonymous said...

Ninna blogu saakaagidhe. Ade haadu, ade raaga. Enu hosa vishyaane nin hatra illa. Bare amma, appa, huduga, lovvu ashte nin mentality.

ವಿನಾಯಕ ಭಟ್ಟ said...

ಕೊನೆಯ ಪ್ಯಾರಾದಲ್ಲಿ ನೀವಾಡಿದ ಶಬ್ದಗಳ ಆಟ ಇಷ್ಟವಾಯಿತು. ಕೊನೆಯ ಪ್ಯಾರಾದಲ್ಲಿರುವಂತಹ ಶಬ್ದದ ಆಟ ಹೊಂದಿರುವ ಕವನ,ಶ್ಲೋಕಗಳು ಸಂಸ್ಕೃತದಲ್ಲಿ ಸಾಕಷ್ಟಿವೆ.ಕನ್ನಡದಲ್ಲಿ ಅವು ಕಡಿಮೆ.

ವಿನಾಯಕ ಭಟ್ಟ said...

ಯಾರೋ ಕೆಲವರು ಏನೇನೋ ಕಾಮೆಂಟಿಸಿದ್ದನ್ನು ನೋಡಿದೆ. ಇದೆಲ್ಲ ಹುಡುಗಿಯರ ಬ್ಲಾಗಿನಲ್ಲಿ ನಿರೀಕ್ಷಿತ. ಇದನ್ನೆಲ್ಲ ಸಹಿಸಿಕೊಳ್ಳಿ ಎಂದು ಹೇಳುತ್ತಿಲ್ಲ. ಆದರೆ ಇವುಗಳೊಂದಿಗೆ ಜೀವಿಸುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಜೀವನದಲ್ಲೂ, ಪತ್ರಿಕೋದ್ಯಮದಲ್ಲೂ ಇಂತಹ ಟೀಕೆ, ಕಿರಿಕಿರಿಗಳನ್ನು ಅನುಭವಿಸಿಕೊಳ್ಳಬೇಕಾಗಿ ಬರಬಹುದು. ಒಬ್ಬರು ಮೇಲೇರುವುದನ್ನು ನೋಡಿ, ತಡೆಯಲು ಪ್ರಯತ್ನಿಸುವವರು ಸಾಕಷ್ಟಿರುತ್ತಾರೆ.
ಹೆದರಿಸುತ್ತಿಲ್ಲ. ಸತ್ಯ ಹೇಳುತ್ತಿದ್ದೇನೆ.

Anonymous said...

@vinayakanna
thanks...
nimma matu nija ...nanage adakkalla bejarilla..
@vijaya joshi
thanks
adanna hudukiyAdaru oduttEne
@prashant
thanks

ವಿನಾಯಕ ಹೆಬ್ಬಾರ said...

Chelo iddu. Eevattu odide. Keep it up all the best.

ಮಿಥುನ ಕೊಡೆತ್ತೂರು said...

ಇನ್ನಷ್ಟು ಬರೆಹಗಳು ಬರಲಿ.
ಶುಭ ಹಾರೈಕೆಗಳು.

Anonymous said...

ನಮಸ್ಕಾರ .. ಇಂದಿನ ಕನ್ನಡಪ್ರಭ ದ ಅಂತರ್ಜಾಲ ಆವ್ರತ್ತಿಯಲ್ಲಿ ನಿಮ್ಮ ಬ್ಲಾಗ್ ನ ಕೊಂಡಿಯನ್ನು ನೋಡಿ ,"ನಿವೇದನೆ" ಗೆ ಕಾಲಿಟ್ಟೆ .. ನೀವು ಕಾವ್ಯದಲ್ಲಿ ಬಳಸಿರೋ ಪದಗಳು ತುಂಬಾ ಚೆನ್ನಾಗಿದೆ.,, ಹೀಗೆ ಬರೆಯುತ್ತಿರಿ ಎನ್ನುತ್ತಾ.....

NiTiN Muttige said...

ನಮಸ್ಕಾರ .. ಇಂದಿನ ಕನ್ನಡಪ್ರಭ ದ ಅಂತರ್ಜಾಲ ಆವ್ರತ್ತಿಯಲ್ಲಿ ನಿಮ್ಮ ಬ್ಲಾಗ್ ನ ಕೊಂಡಿಯನ್ನು ನೋಡಿ ,"ನಿವೇದನೆ" ಗೆ ಕಾಲಿಟ್ಟೆ .. ನೀವು ಕಾವ್ಯದಲ್ಲಿ ಬಳಸಿರೋ ಪದಗಳು ತುಂಬಾ ಚೆನ್ನಾಗಿದೆ.,, ಹೀಗೆ ಬರೆಯುತ್ತಿರಿ ಎನ್ನುತ್ತಾ.....

Brihaspati said...

oMderaDu padagaLalli kaaguNitada dOShagaLu dRuShti cukkeyaMtive ee kavanada sobagige. saripaDisikoMDu munnuggiri...shubhavaagali

Anonymous said...

Dear chaitra

I am sulaiman baithadka from united arab emirates .I like your poem & thoughts. I am requesting to you please dedicate this song to our respected soldiers those who work for our country. keep it up.jai hind
from :
sulaimanbaithadka@yahoo.com

Anonymous said...

dear chaitra
I am mr: Mohammed Rafeeqe from somapady puttr taluk I enjoyed from your poem .keep it up you are really great.

thank you