Tuesday, July 1, 2008

ಯಾರು ನೀ........???

ಪ್ರತೀ ಮುಂಜಾನೆ ಯ ತಣ್ಣನೆಯ ಶುಭೋದಯದಿ
ಪ್ರತಿ ಮುಸ್ಸಂಜೆಯ ಮಾತಿರದ ಮೌನದಲ್ಲಿ
ಪ್ರತಿದಿನದ ಮುಕ್ತಾಯದ ಕನಸುಗಳ ಕಲರವದಿ
ಒಮ್ಮೆಲೇ ನೆನೆಪಾಗಿ ತಕ್ಷಣವೆ ಮರೆಯಾಗಿ ಕಾಡುತಿಹೆಯಲ್ಲ
ನೀನ್ಯಾರು ಹೇಳೋ......?
ಅರಳುತಿಹ ಮೊಗ್ಗಿನ ಆ ನಸುಗಂಪಿನೊಳಗೊಮ್ಮೆ
ಭಿಮ್ಮನೆಯ ಎಕಾಂತದ ಆ ನೀರವತೆಯೊಳಗೊಮ್ಮೆ
ನನ್ನೇ ನಾ ಮರೆತು ನಗುತಿಹ ಆ ನಗುವಿನೊಳಗೊಮ್ಮೆ
ಈ ಹುಚ್ಚು ಹುಡುಕಾಟಗಳಿಗೆನ್ನ ನೀ ತೊಡಗಿಸಿದೆಯಲ್ಲ
ನೀನ್ಯಾರು ಹೇಳೋ.....?
ಸುಮ್ಮನೊಮ್ಮೆ ನಗುವಾಗ, ಬಿಕ್ಕಳಿಸಿ ಅಳುವಾಗ
ನೆನಪುಗಳಿಗೆಲ್ಲ ವಿರಾಮ ನೀಡಿ ಬರಿ ಕನಸಿನಲ್ಲೆ ಕುಳಿತಾಗ
ಕಾರಣವೆ ಇರದೆ ಮನವೊಮ್ಮೆ ಅತ್ತಾಗ
ಈಮನದ ಕದವ ಮೆಲ್ಲನೆ ತೆಗೆದು ನಗುತ ಒಳ ಸರಿದೆಯಲ್ಲ
ನೀನ್ಯಾರು ಹೇಳೋ.......?
ಸ್ನೇಹಿತನೋ ನೀನನಗೆ, ಪ್ರಿಯತಮನೋ ನೀನನಗೆ
ನೀನ್ಯಾರೆಂಬುದನೆ ನಾನರಿಯೆನೋ ಇಂದು
ಪ್ರೇಮವಾದರೆ ಇರಲಿ, ಸ್ನೇಹವಾದರೆ ಸಿಗಲಿ
ಈ ಭಂದಕೊಂದು ನಾ ಹೆಸರಿಡೆನೋ ಎಂದೆಂದು
ಆದರೂ ಹೇಳೊಮ್ಮೆ "ಯಾರುನೀ" ಎಂದು.......

10 comments:

ವಿಜಯ್ ಜೋಶಿ said...
This comment has been removed by the author.
ವಿಜಯ್ ಜೋಶಿ said...

'ನಿವೇದನೆ' ಎನ್ನುವ ಹೆಸರೇ ತುಂಬ ಅರ್ಥಪೂರ್ಣ. ಬ್ಲಾಗಿನ ಹೆಸರು ನನಗಂತೂ ತುಂಬಾ ಇಷ್ಟವಾಯಿತು. ನಿಮಗನಿಸಿದ್ದನ್ನು ಓದುಗರ ಮುಂದೆ ನಿವೇದಿಸಿಕೊಳ್ಳಲು 'ನಿವೇದನೆ' ಒಳ್ಳೆಯ ವೇದಿಕೆ.

ಕವನ ಕೂಡ ತುಂಬಾ ಚೆನ್ನಾಗಿದೆ.
"ಕಾರಣವೆ ಇರದೆ ಮನವೊಮ್ಮೆ ಅತ್ತಾಗ
ಈಮನದ ಕದವ ಮೆಲ್ಲನೆ ತೆಗೆದು ನಗುತ ಒಳ ಸರಿದೆಯಲ್ಲ
ನೀನ್ಯಾರು ಹೇಳೋ.......?"

ಮತ್ತು

"ಪ್ರೇಮವಾದರೆ ಇರಲಿ, ಸ್ನೇಹವಾದರೆ ಸಿಗಲಿ
ಈ ಭಂದಕೊಂದು ನಾ ಹೆಸರಿಡೆನೋ ಎಂದೆಂದು
ಆದರೂ ಹೇಳೊಮ್ಮೆ "ಯಾರುನೀ" ಎಂದು......."

ಇವೆರಡು ಸಾಲುಗಳು ಚೆನ್ನಾಗಿವೆ. "ಯಾರು ನೀನು?" ಅಂತ ಪಟ್ಟು ಹಿಡಿದು ಕೇಳುವ ಪರಿ ಕೂಡ ಮೆಚ್ಚುವಂಥದ್ದೇ.

ನಿಮ್ಮನ್ನು ಮುಂಜಾನೆ, ಮುಸ್ಸಂಜೆಗಳಲ್ಲಿ ಕಾಡುವ ಆತ ಸಿಕ್ಕರೆ ಆ ಬಗ್ಗೆಯೂ ಒಂದು ಕವಿತೆ ಬರೆಯಿರಿ!!!

mruganayanee said...

channaagide hudgI. aadre 'avana' bagge bahaLashtu jana bareyuttaarallava?(andre tanna hudugana bagge bahaLashtu huDugiyaru, hudygiya bagge bahaLaShtu hudugaru) nInU adannE bareyabEkaa kELikO???

ಭಿಮ್ಮನೆಯ ಎಕಾಂತದ ಆ ನೀರವತೆಯೊಳಗೊಮ್ಮೆನನ್ನೇ ನಾ ಮರೆತು ನಗುತಿಹ ಆ ನಗುವಿನೊಳಗೊಮ್ಮೆಈ ಹುಚ್ಚು ಹುಡುಕಾಟಗಳಿಗೆನ್ನ ನೀ ತೊಡಗಿಸಿದೆಯಲ್ಲ ನೀನ್ಯಾರು ಹೇಳೋ.....?

iShTavaada saalugaLu... barItiru..

Shashanka G P (ಉನ್ಮುಖಿ) said...

ಅದು ’ಬ೦ಧ’, ’ಭ೦ದ’ ಅಲ್ಲ ತಾನೇ.
ಗೊತ್ತಿದ್ದೂ ಬರೆದಿದ್ದರೆ ಉಪೇಕ್ಷಿಸಿ. ಕಾವ್ಯದಲ್ಲಿ ಎಲ್ಲವೂ ಸಮ್ಮತವೇ.

Ravi Adapathya said...

hi...very good blog..blog name is nice...

ವಿನಾಯಕ ಭಟ್ಟ said...

ಬ್ಲಾಗು ಪ್ರಪಂಚಕ್ಕೆ ಸ್ವಾಗತ. ನಿಮ್ಮ ಅನಿಸಿದ್ದನ್ನು ಬರೆಯುವ ಹವ್ಯಾಸ ಕೇವಲ ಕವನಕ್ಕೆ ಸೀಮಿತವಾಗದಿರಲಿ ಎಂದು ಅಶಿಸುತ್ತೇನೆ. ನಿಮ್ಮ ಪತ್ರಿಕೋದ್ಯಮ ಕಲಿಕೆಗೆ ಬ್ಲಾಗು ಮೆಟ್ಟಿಲಾಗಲಿ. ನಿಮ್ಮ ಬರವಣಿಗೆ ಪ್ರಕಟಿಸುವ, ಅದಕ್ಕೆ ಪ್ರತಿಕ್ರಿಯೆ ಪಡೆಯುವ ಅವಕಾಶ ಬ್ಲಾಗಿನಲ್ಲಿ ಲಭ್ಯ. ಅದನ್ನು ಬಳಸಿಕೊಳ್ಳಿ.
ಪ್ರತಿ ಪತ್ರಿಕೋದ್ಯಮ ವಿದ್ಯಾರ್ಥಿಗೂ ಒಂದು ಬ್ಲಾಗು ಇರಬೇಕು ಅಂತ ಅಂದುಕೊಳ್ಳುತ್ತಿದ್ದೆ ನಾನು. ನೀವು, ವಿಜಯ್ ಜೋಶಿ ಹಾಗೂ ಇನ್ನು ಕೆಲೆವರು ಅದನ್ನು ಮಾಡಿ ತೋರಿಸಿದ್ದೀರಿ.

Unknown said...

ಹಾಯ್ ಚೈತ್ರ ನಿಮ್ಮ ಬ್ಲಾಗ್ ಹೆಸರು ನಿಮ್ಮಷ್ಟೇ ಚೆನ್ನಾಗಿದೆ. "ಯಾರುನೀ" ತುಂಬಾ ಚೆನ್ನಾಗಿದೆ. ’ಪ್ರೇಮವಾದರೆ ಇರಲಿ, ಸ್ನೇಹವಾದರೆ ಸಿಗಲಿ, ಈ ಬಂಧಕೊಂದು ಹೆಸರಿಡೆನೊ ಎಂದೆಂದು. ಆದರೂ ಹೇಳೊಮ್ಮೆ "ಯಾರುನೀ" ಎಂದು... ಈ ಸಾಲು ತುಂಬಾ ಇಷ್ಟವಾಯಿತು. ಇಲ್ಲಿ ಈ ಭಂದ ಅನ್ನೋದು ಈಬಂಧ ಅಂತ ಆಗಿದ್ರೆ ಚೆನ್ನಾಗಿತ್ತು. ಇದು ನನ್ನ "ನಿವೇದನೆ". ಹೀಗೆ ಮುಂದುವರಿಯಲಿ ನಿಮ್ಮ ನಿವೇದನೆ ಅಂತ ನಿವೇದನೆ ಮಾಡಿಕೊಳ್ಳುತ್ತೇನೆ.

Anonymous said...

ಚೈತ್ರ ,

ಬ್ಲಾಗ್ ಲೋಕಕ್ಕೆ ಸ್ವಾಗತ. ಆಗಾಗ್ಗೆ ಬರೆಯುತ್ತಿರಿ.
-ಜಿತೇಂದ್ರ

shivaraj said...

ur's imagin is wonderfulllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllllll

Anonymous said...

superb!!!!!!!!!!!!!! miss chita