Monday, October 13, 2008

ಮರೆಯಲಾಗದ ದಿನಗಳು ಮರಳಿ ಬರಲಿ......

ಮತ್ತದೇ ದಿನಗಳು ಮರಳಿ ಬರಬೇಕಿತ್ತು.........

ಮರಳಿನಲ್ಲೊಂದು ಚಂದದರಮನೆ ಕಟ್ಟಿ
ಅಲೆ ಅಪ್ಪಳಿಸಿ ಉರುಳಸದಂತೆ ಕಾದು
ಕೊನೆಗೂ ಅಲೆಗೆ ಸೋತು ಶರಣಾದ ದಿನಗಳು
ಅತ್ತರೂ ಮರುಕ್ಷಣವೇ ಕಣ್ಣೊರೆಸಿ ನಕ್ಕು
ಮುಳ್ಳು,ಕಲ್ಲಿಗೆ ಎಡ ಪೆಟ್ಟಾದರೂ ನಕ್ಕು
ಓಡಿ,ಓಡಿ ಮುಂದೆ ನಿಲ್ಲುವವಳು ನಾನೇ ಆಗಬೇಕೆಂಬ
ಹುಚ್ಚಿದ್ದ ಆ ಸ್ಮರಣೀಯ ದಿನಗಳು.....

ರಾತ್ರಿಯ ಕನಸಲ್ಲಿ ಪ್ರಧಾನಿಯೂ ನಾನಾಗಿ
ಹೊಸನಾಡ ಕಟ್ಟಿ,ದೇಶವಾಳಿ ಮೆರೆದು
ಸಾಮ್ರಾಜ್ಯಕ್ಕೆ ಅಧಿಪತಿಯಾಗಿ ನಲಿದಾಡಿದ ದಿನಗಳು

ಬಹುಷಃ.....
ಕನಸಲ್ಲೂ ಮರಳದ ದಿನಗಳವು
ಬಾಲ್ಯದ ಆ ಅದ್ಭುತ ದಿನಗಳು

ಪ್ರಾಸವೇ ಪದ್ಯ,ಸೌಂದರ್ಯವೇ ಪ್ರೇಮ,
ಜಾಳು ಕನಸುಗಳೇ ಜೀವನ,ಆಡಂಬರವೇ ಬದುಕು
ಎಂಬ ಅರ್ಥರದ ಹಳಹಳಿಕೆಗಳಲೇ ಮುಳುಗೆದ್ದು
ಉತ್ತರವೇ ಇರದ ಪ್ರಶ್ನೆಗಳಿಗೆ ಉತ್ತರವ ಹುಡುಕಲು
ಹೆಣಗಾಡಿ,ತಿರುಗಾಡಿ,ನಗಲಾರದೇ ಅಳುವೂ ಬರದೇ
ಸುಮ್ಮನೇ ನೀಲಿಯಾಗಸವ ನೋಡುತಿಹ ದಿನಗಳಿದು
ಬರಲೇಬಾರದಿತ್ತು ಈ ದಿನಗಳು

ಇರಬೇಕಿತ್ತು ಬಾಲ್ಯವೇ ಜೀವನ ಪರ್ಯಂತ......
ಮುಗ್ಧತೆ,ಮೌನ,ಮಮತೆ ಹುಟ್ಟಿಸುವ ನಗುನೊಡತಿಯಾಗಿ
'ಮರೆಯಲಾರದ ಮಗು' ಇದೆಂಬ ಹೊಗಳಿಕೆಗೊಡತಿಯೂ ಆಗಿ
ಎಂಬ ಕನಸು ಕಾಣುತ್ತೇನೆ...ನನಸಾಗದಿದ್ದದ್ದಿದೆಂದು ತಿಳದೂ,

ಚಿಕ್ಕವಳಾಗೇ ಉಳಿದರೆ ಪ್ರಧಾನಿಯಾಗಲಾಗದಲ್ಲ
ಕೊನೆಗದು ಕನಸಾಗೇ ಉಳದರೆ??.... ಇದೂ ನನ್ಮನದ ಮಾತೇ....

"ಹುಚ್ಚು ಕೋಡಿ ಮನಸು, ಈ ಹದಿನಾರರ ವಯಸು"
ನಿಜ ಬರಲೇಬಾರದಿತ್ತು ಈ ವಯಸ್ಸು..........

6 comments:

ವಿನಾಯಕ ಭಟ್ಟ said...

ಅಂತೂ ಈ ದಿನಗಳಿಗಿಂದ 'ಆ ದಿನಗಳು' ಒಳ್ಳೆಯದಿದ್ದವು ಅಂತೀರಾ? ನನಗೂ ಎಷ್ಟೋ ಸಾರಿ ಅನ್ನಿಸಿದ್ದಿದೆ ಬಾಲಮರಳಿಬರಬಾರದೇ ಅಂತ.
'ಅತ್ತರೂ ಮರುಕ್ಷಣವೇ ಕಣ್ಣೊರೆಸಿ ನಕ್ಕು' ಸಾಲು ಚೆಂದಾಗಿದೆ.
ಹುಚ್ಚುಕೋಡಿ ಮನಸು ಹದಿನಾರರ ವಯಸು...
ವಯಸ್ಸಾಗುತ್ತಾ ಯೌವ್ವನದ ದಿನಗಳೂ ಮರಳಿ ಬರಬಾರದೆ ಅನ್ನಿಸಬಹುದು. ಅಲ್ವಾ?

ವಿಜಯ್ ಜೋಶಿ said...

ನನಗೂ ಅನ್ನಿಸುವುದು ಇದೇ ಸಂಗತಿಗಳು.. ಆದರೆ ಅವನ್ನೆಲ್ಲ ಕವನದಲ್ಲಿ ಹೇಳಲು ಬಾರದು..
ಮತ್ತೊಮ್ಮೆ ಕುಂದಾಪುರದ ವೆಂಕಟರಮಣ ಶಾಲೆಗೆ ಹೋಗಿ, ಕ್ಲಾಸಿನಲ್ಲಿ ಕ್ರಿಕೆಟ್ ಆಡಿ, ಸದಾಶಿವ ಭಟ್ಟರಿಂದ ಬೈಸಿಕೊಳ್ಳಬೇಕು ಅಂತ ಆಸೆ. ಆದರೇನು ಮಾಡೋದು? ಹಾಳಾದ ವಯಸ್ಸು ಬಿಡಬೇಕಲ್ಲ?

Madhava said...

gata kaalada ramya halahalikeyannu bittu jeevanavannu edurisuva dhairya ninage barali.

This is just escaping from the present. I don't like the way of expressing your thoughts as if you are crying. I'll read KANUGODU MANE for you. then you will understand my comment... anyway continue writing...

ತೇಜಸ್ವಿನಿ ಹೆಗಡೆ said...

ನಿಮ್ಮ ನಿವೇದನೆ ಇಷ್ಟವಾಯಿತು. ಹೊಸ ಪ್ರತಿಭೆಯೊಂದರ ಪರಿಚಯವಾಗಿದ್ದಕ್ಕೆ ಸಂತೋಷವೂ ಆಯಿತು.

ಕವನದ ಆಶಯ ಸುಂದರವಾಗಿದೆ. "ಗತಂ ನ ಶೋಚಯೇತ್ ಪ್ರಾಜ್ಞ" ಎಂದು ಸಂಸ್ಕೃತ ಸುಭಾಷಿತವೊಂದು ಹೇಳುತ್ತದೆ. ಆದರೂ ಈ ಮರುಳ ಮನಸ್ಸು ಬಾಲ್ಯದ ಸವಿ ನೆನಪುಗಳನ್ನು ನೆನೆದು ಮರುಗುವದನ್ನು ಬಿಡಲೊಲ್ಲದು ಅಲ್ಲವೇ?

ಜಗಜಿತ್ ಸಿಂಗ್‌ರ ಗಝಲ್ ನೆನಪಾಯಿತು "ಯೆ ದೌಲತ ಭಿ ಲೇಲೋ..." ಕೇಳಿದ್ದೀರಾ ಈ ಹಾಡನ್ನು?

byanada said...

tumba sundaravada kanasu kanavarike biduvaaga estappa madura matu sahaja. barahagalu malenadinaste muddagive.

Ittigecement said...

ಕವನ ಚೆನ್ನಾಗಿದೆ..